Saturday, July 25, 2009

ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ...

ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ,
ನಿನ್ನೊಳಿದೆ ನನ್ನ ಮನಸು.

ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ,
ನಿನ್ನೊಲುಮೆ ನನ್ನ ಕಂಡು, ನಿನ್ನೊಳಿದೆ ನನ್ನ ಮನಸು.

ಸಾಗರನ ಹೃದಯದಲಿ ರತ್ನಪರ್ವತ ಮಾಲೆ
ಮಿಂಚಿನಲಿ ಮೀಯುವುದಂತೆ,
ತೀರದಲಿ ಬಳುಕುವಲೆ ಕಣ್ಣ ಚುಂಬಿಸಿ ಮತ್ತೆ ಸಾಗುವುದು ಕನಸಿನಂತೆ.
ನಿನ್ನೊಳಿದೆ ನನ್ನ ಮನಸು.

ಅಲೆ ಬಂದು ಕರೆಯುವುದು, ನಿನ್ನೊಲೆಯರಮನೆಗೆ,
ಒಳಗಡಲ ರತ್ನಪುರಿಗೆ
ಅಲೆಯಿಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ,
ಒಳಗುಡಿಯ ಮೂರ್ತಿಮಹಿಮೆ. ನಿನ್ನೊಳಿದೆ ನನ್ನ ಮನಸು.


No comments:

Post a Comment