Monday, June 8, 2009

ಮತ್ತೊಂದು ರಾತ್ರಿಯ ಪದ್ಯ.

ತುಂಬ ಹಿಂದೆ ಬರ್ದಿರೋ ಪದ್ಯಗಳೆಲ್ಲ ಹಾಗೆ ಇದೆ, ಇದೂ ಸ್ವಲ್ಪ ಮೊದ್ಲಿನ್ ಥರಾನೇ ಇದೆ ಆದ್ರೂ ಓದಿ. ನಮ್ ಧಾರವಾಡ್ ಕಡೆ ಮಂದಿ, ಅಂದ್ರ ಶುದ್ಧ ಕನ್ನಡ ಬರೋ ಜನಕ್ಕ ಭಾಳ ಛೋಲೊ ತಿಳೀತೇತಿ. ಒಂದೋದ್ ಶಬ್ದಾನೂ analyze ಮಾಡ್ಕೊಂಡ ಓದ್ರಿ.

ಹೊತ್ತು ಮುಳುಗಿ ಕತ್ತಲಾಗುತ್ತಿಂದತೆಯೇ
ಹೊತ್ತಿಕೊಳ್ಳುತ್ತವೆ ನನ್ನಲ್ಲಿ ವಿರಹದ ಹಾಡುಗಳು.
ರಾತ್ರಿಯೆಲ್ಲ ಮನವೆಂಬುದು ಸೂತಕದ ಮನೆಯಾಗಿ
ಕಾಯುತ್ತಿರುತ್ತದೆ ಎಂದೂ ಸಾಯದ ಸಾವಿಗಾಗಿ.

ಎಂದೋ ಸಾಯಬೇಕಿದ್ದ ವಿರಹ ಇಂದೂ ಬದುಕಿದೆ
ಬಹು ಹಿಂದೆ ನೀಡಿದ ಹನಿ ಪ್ರೇಮದ ಸಂಜಿವಿನಿಯಿಂದಾಗಿ.
ಕಗ್ಗದ ಸುಗ್ಗಿಯಲಿ ಕೈಗೆಟುಕದ ಫಸಲು ರಾಶಿ-ರಾಶಿ
ಒಂದೆ ರಾತ್ರಿಯಲಿ ಬಿತ್ತಿ, ಬೆಳೆದು, ಉಂಡು
ಉಳಿದಿದ್ದಲ್ಲವನೂ ನಾಳೆಗಾಗಿರಿಸಿದ್ದೇವೆಂಬುದು ಬರಿ ನೂವು.

ಕಸುವು ಬೇಕಿಲ್ಲ, ಬೇಸಾಯಬೇಕಿಲ್ಲ, ಕಸ ಕೀಳಬೇಕಿಲ್ಲ
ನೀರುಣಿಸಿ, ಹಕ್ಕಿಕಾಯ್ದು, ಕೊಯ್ಲು ಮಾಡಬೇಕಿಲ್ಲ,
ಅವಳು ಬರಿ ಬಿತ್ತಿದರೆ ಸಾಕು ಎತ್ತೆತ್ತಲೂ ವಿರಹದ ತೆನೆ.

ಒಂದು ರಾತ್ರಿ, ಒಂದು ಪದ್ಯ ಸ್ವಲ್ಪ ಮಧ್ಯ
ಯಾಕೆ ಕಾಯಬೇಕಿದೆ ಶಿವರಾತ್ರಿಗಾಗಿ?
ಒಂದು ದಿನ ಅವಳು ಕೊಟ್ಟ ಪ್ರೇಮವೇ ಕೊನೆ
ಮಿಕ್ಕಿದ್ದೆಲ್ಲವೂ ಬರೀ ಶಿವರಾತ್ರಿಗಳು.

No comments:

Post a Comment