Wednesday, June 10, 2009

nursery rhymes ....

ನನ್ನ ಪಾಟಿ ಕರಿಯದು, ಸುತ್ತು ಕಟ್ಟು ಬಿಳಿಯದು.
ಬಹಳ ಚಂದ ಿರುವುದು, ಬರೆಯಲಿಕ್ಕೆ ಬರುವುದು.
ಅಪ್ಪ ದುಡ್ಡು ಕೊಟ್ಟನು, ಪೇಣೆಯನ್ನು ತಂದೆನು.
ಅಆಇಈ ಬರೆದೆನು, ಅಮ್ಮನ ಮುಂದೆ ಹಿಡಿದೆನು.
ಅಮ್ಮ ಹಿಗ್ಗು ಆದಳು, ತಿಂಡಿಯನ್ನು ಕೊಟ್ಟಳು.
ಗಪಾ ಗಪಾ ತಿಂದೆನು, ಥಕಾ ಥಕಾ ಕುಣಿದೆನು.
------------------------------------------
ಒಂದು ಕಾಡಿನ ಮಧ್ಯದೊಳಗೆ
ಎರಡು ಗಿಡಗಳ ನಡುವೆ ಮಲಗಿ
ಮೂರು ಕರಡಿಗಳಾಡುತ್ತಿದ್ದವು
ನಾಲ್ಕು ಮರಿಗಳ ಸೇರಿಸಿ
ಐದು ಜನರು ಬೇಟೆಗಾರರು
ಆರು ಬಲೆಗಳ ಎಳೆದು ತಂದು
ಏಳು ಕರಡಿಗಳ ಹಿಡಿದು ನೋಡದೆ
ಎಂಟು ಹಿಡಿದೆವು ಎಂದರು
ಒಂಭತ್ತೆಂದನು ಅದರಲೊಬ್ಬ
ಹತ್ತು ಎಂದನು ಬೇರೆಯವನು
ಇಲ್ಲೀಗೀಕತೆ ಮುಗಿಯಿತು
--------
ಅತ್ತಿಕಟ್ಟಿ ಬತ್ತಿಕಟ್ಟಿ
ಬಾನೂರ್ ಬಸ್ನೂರ್
ಕೈ ಕೈ ಜೋಡ್ ಕೈ
ಪಂಚಂ ಪಗಡಂ
ತಿಪ್ಪಿ ಮ್ಯಾಲ ಕೋಳಿ
ಜಗತ್ತೆ ಬೋಳಿ

1 comment:

  1. innu 1st standard nalli ideyenu.. waw.. its great to recall and say it.. thank you

    ReplyDelete