ಮನುಷ್ಯ ಸದಾ ಯುದ್ಧ ಮಾಡುವ ತರಾತುರಿಯಲ್ಲಿರಬೇಕು, ಹೆಚ್ಚೆಂದರೆ ಯುದ್ಧ ಮಾಡಬೇಕು, ಆದರೆ ಏನನ್ನೂ ಗೆಲ್ಲಬಾರದು. ಗೆದಿಯಬೇಕೆಂಬ ಕಾತುರತೆಯ ಮುಂದೆ ಜಯ ಏನೂ ಅಲ್ಲ.
--------------------------------
ಎಲ್ಲಿಗೆ?
ಸುಮ್ಮನೆ
--------------------------------
ಭ್ರೂಣ (womb)
ಬಾಡಿಗೆ ಮನೆಯೋ?
ಸ್ವಂತದ್ದೋ?
--------------------------------
(ಹಳೆ ಹಾಡು, ನಮ್ಮಜ್ಜಿ ಹೇಳಿದ್ದು)
ಚಂದಪ್ಪ ಚಂದಪ್ಪ ಚಲುವ
ಬಂಡಿ ಏರ್ಕೊಂಡ ಬರುವ
ಬಂಡಿ ಹೊಡಿಯೋ ಜಾಣ
ಜಾಣನ್ ಮುಕಳಾಗ ಮ್ಯಾಣ
ಮ್ಯಾಣ ತಗಿಯೋ ಮಲ್ಲಿ
ಮಲ್ಲಿ ಕಾಲಾಗ ಪಿಲ್ಲಿ
----------------------------
ಹಗಲು
ನಿನ್ನ ಕನಸುಗಳ ಮಧ್ಯೆ ಸಿಗುವ
ಇಂಟೆರವೆಲ್
---------------------------
ಗಂಟೆ
ದೇವರ ಅಲಾರಾಂ
---------------------------
ಮೇಪ ಸಾವಿಗನ
ದಾರಿ ಹೋಹುಳದಾಗ
ಎನ್ನ ಬಳಿಗಾರು
ಸುವಾ ನುಡಿವನು
ಇಳಯ ಮರೆಗೆ
ಸರಿ ತುಂಬಿದ
ಓ...
ಓ...
ಓಲೆಗಾರ
--------------------------------
No comments:
Post a Comment