Tuesday, June 9, 2009

ಗಾಂಧಿಜೀ...

ನಾನು ಬೆಳಿಗ್ಗೆ ಎದ್ದು ಬಾಪೂಗೆ ಹೇಳಿದೆ.
'ಬಾಪೂ ನಿನ್ನೆ ರಾತ್ರಿ ಕನಸ ಕಂಡೆ, ಕನಸು ಕಾಣುವುದು ತಪ್ಪಾ'?
ಇಲ್ಲವಲ್ಲ ಎಂದರು ಬಾಪೂ.

ಒಂದು ಬಯಲು, ಸುತ್ತ ಹಸಿರು
ಮಧ್ಯದಲ್ಲೊಂದು ಪುಟ್ಟ ಮನೆ, ಅದು ನಂದೆ
ಒಂದು ಸರಳ ಮಧುವೆ
ಸುಂದರ ಹೆಂಡತಿ, ಅವಳು ನನ್ನವಳೆ
ಚಂದದ ಮಗು, ಅದೂ ನಂದೆ

ಮಗ ಹುಟ್ಟಿದಾನಲ್ಲ,
ಅವನಿಗಂತ ಸ್ವಲ್ಪ ಕಾಸು, ಜಮೀನು
ಜಮೀನಿನ ಮೇಲೆ ಆಳು, ಕಾಳು
ಅವರಿಗೊಂದಿಷ್ಟು ನೆಲೆ, ಬೆಲೆ

ಮತ್ತೆ ಬಾಪೂಗೆ ಹೇಳಿದೆ.
'ಬಾಪೂ ನಿನ್ನೆ ರಾತ್ರಿ ಕನಸ ಕಂಡೆ, ಕನಸು ಕಾಣುವುದು ತಪ್ಪಾ'?
ಇಲ್ಲ, ಇಲ್ಲ ಕನಸು ಸ್ವಲ್ಪ ದುಬಾರಿಯಾಯ್ತು, ನನ್ನ ಉಪವಾಸದ ಹಾಗೆ.
ನಾಳೆ ಕನಸನ್ನು ಮುಂದುವರೆಸಬೇಡ ಎಂದರು ಬಾಪು!

No comments:

Post a Comment