Monday, June 29, 2009
BPO FAMILY
ಹೊರಡೆಂದರು, ರೆಡಿಯಾಗಿರಲಿಲ್ಲ.
ಮಲಗೆಂದರು, ಹಾಸಿಗೆಯಿರಲಿಲ್ಲ.
ಏಳೆಂದರು, ಮಗ್ಗುಲಿರಲಿಲ್ಲ.
ಸ್ನಾನವೆಂದರು ಸೋಪಿರಲಿಲ್ಲ.
ಮಕ್ಕಳೆಂದರು, ಮಧುವೆಯಾಗಿರಲಿಲ್ಲ.
ಬೆಳಕು ಇದ್ದದ್ದೆಲ್ಲಿ?
ಗೀರಿದ ಕಡ್ಡಿಯಲ್ಲೋ?
ನೆನೆದ ಬತ್ತಿಯಲ್ಲೋ?
ಹೊತ್ತಿಸಿದ ಕೈಗಳಲ್ಲೋ?
ಹೊಳೆದ ಕಂಗಳಲ್ಲೋ?
ಓಡಿದ ಕತ್ತಲೆಯಲ್ಲೋ?
ಕಂಡವರಾರು, ಕಂಡಿದ್ದರೆ ಕಡ್ಡಿ ಗೀರುವರಾರು?
Saturday, June 27, 2009
ಮೋಡ ಕವಿದ ಸಂಜೆ ಮತ್ತು ತುಸ್ಸೆ ನೈನಾ ಲಾಗೆ ಪಿಯಾ ಸಾವರೇ...
ಯೋ ಹೀ ಬಸ್ ಮೇ ಅಬ್ ಎ ಜಿಯಾ ಸಾವರೇ...
ಮೋಹಬ್ಬತ್ ತೋ ಎಕ ಜಾವೇದಾರ್ ಜಿಂದಗೀ ಹೈ.
ತುಸ್ಸೆ ನೈನಾ ಲಾಗೆ ಮಿಲೆ ರೋಶನೀ, ತುಸ್ಸೆ ಮನ್ ಜೋ ಲಾಗಾ ಮಿಲೀ ಜಿಂದಗೀ...
ಮಳೆ ಮತ್ತು ಸಂಜೆ two most admirable things for me. Take a chance, while nobody at home, make your self a cup of tea n sit beside window let your favorite song play along. And start recalling your past, the first girl/boy, at whom you said 'wow', the first movie you watched in theater, the first time you cried alone, the first shirt you bought with your own money, the love you always missed...
I have a damn good story of my own which i always recall. It was a girl, to whom I uttered 'wow' (to many other also though). It was 2007 in Boston airport on my way back to Bangalore. I was much exited about my new SLR camera which i bought after so many rounds dilemma. I was taking pictures or planes through glass, and I saw her after few benches. I was really fainted to see such a beautiful girl. She was short, bit chubby, wearing pinks and tied half of her hairs. By then I was bit lean, dark and not so good looking .(even now also). ಮನ್ಸು ಉಯ್ಯಾಲೆಯಾಗಿ ತೇಲ್ತು ಅಂತಾರಲ್ಲಾ ಹಾಗಾಯ್ತು ನಂಗೆ. ಆಕಿ ಖರೇನ ಅಷ್ಟ ಛಂದ ಇದ್ಲು. ಹುಡುಗ್ರ ಬುದ್ದಿ ಗೊತ್ತಲ್ಲ, ಹಂಗ ಶುರು ಆಯ್ತು I just cudnt stop looking at her and she didn't even noticed me that I am noticing her. I watched her so many times and each time i felt like am watching her for first time.
And, we got boarding call, i joined a line. after few minutes I again searched for her AILA! she was behind me in same line! I watched her so close and wo wo wo no words to describe how i felt. The miracle was she also watched me! no talks, no smiles, just looks ಅಷ್ಟೆ, ಅಮೇಲೆ we got into plane and i lost her. I had a hope that she may take a seat somewhr near me, but she didnt. Although I used washroom through different routes for couple of times to just to make sure i can find her seat. I thought I lost her and ಮುಚ್ಕೊಂಡು ಕೂತೆ. ಆದ್ರೆ ಕತೆ ಇಲ್ಲಿಗೆ ಮುಗಿಲಿಲ್ಲ. ಬೋಸ್ಟನ್ ನಿಂದ ಬೆಂಗಳೂರಿಗೆ ಸೀದಾ ಇಮಾನ ಇದ್ದಿಲ್ಲ, ಪ್ಯಾರೀಸಲ್ಲಿ ಛೇಂಜ್ ಮಾದ್ಬೆಕಿತ್ತು. ಪ್ಯಾರೀಸಲ್ಲಿ ಏನಾತು ಅಂತ ಮತ್ತೆ ಬರೀತಿನಿ...
Saturday, June 13, 2009
The hunt is sweeter than the kill
Fantasies have to be unrealistic because the moment... the second... that you get what you seek, you don't, want it anymore. In order to continue to exist, desire must have its objects perceptually absent. It's not the 'it' that you want, its the passion of 'it'. So, desire supports crazy fantasies, this is what I mean, when I say that, we are only truly happy when day dreaming about future happiness. Or I say hunt is sweeter than the kill. Be careful what you wish for, not because you will get it but because you're doomed not to want it once you do.
So my lesson is, living by our wants will never make us happy. What it means to be fully human is to strive to live by ideas and ideals and not to measure our life by what we are attained in terms of our desires but those, small moments or integrity, compassion, rationality, even self scarifies. Because in the end, the only way that we can measure the significance of our lives is by valuing the lives of others.
ಮನುಷ್ಯ ಸದಾ ಯುದ್ಧಮಾಡುವ ತರಾತುರಿಯಲ್ಲಿರಬೇಕು. ಹೆಚ್ಚೆಂದರೆ ಯುದ್ಧಮಾಡಬೇಕು ಆದರೆ ಏನನ್ನೂ ಗೆಲ್ಲಬಾರದು. ಗೆದಿಯಬೇಕೆಂಬ ಹಂಬಲದ ಮುಂದೆ ಗೆದ್ದೆನೆಂಬ ಜಯ ಏನೂ ಅಲ್ಲ.
Friday, June 12, 2009
Creativity NOT equals art
I have recently spoken to a friend of mine about the working processes and at one point he said to me:
"We let creative guys do the design work"
"What do you mean by that?" - I asked.
"Well, you know, web designers and other.. creative people"
"You think the only creative people in your company are designers? Don't you think that developers can also be creative?"
"Well, yes for the first question and no for the second one"
"Uh, you're so wrong, man"
Creativity NOT equals art
Creativity is fueled by the process of either conscious or unconscious insight. An alternative conception of creativeness is that it is simply the act of making something new."
So, creativity is not reserved for web designers (and artists, or art, in general). Anyone can be creative. It can be seen outside the design or art. Take cooking for example. Can cook be creative? Could food be prepared or arranged on a plate in a creative way? Yes, I think!
Anyone can be creative
I would rather say that creativity is a state of mind, or simply - a mood. That means that anyone can feel creative sometimes and do something creative. Some of us could be more often in such a mood and some ocould be just a few times. Noone is creative all the time.
So, back to my conversation with a friend - anyone can be creative: designers, managers, cooks, developers, you name it. Can code be written in a creative way? Just because there are rules, patterns and syntaxes that doesn't means that problem can't be resolved in a creative way. So yes, developers also can be creative!!!
Just to remind remind - creative people are not scientists. They never sit in dark laboratories with all un accessible equipments. They are among us, the only difference is 'they loot at things in different way'. My two basic lessons for being creative are,
1. Look at the things in different ways
2. Follow the 1st rule each time.
We all travel in bus, drink coffee every hours in office, wait for bus in stops, carry shopping bag... etc etc. Start thinking bit 'hatke' and u got it.
Wednesday, June 10, 2009
nursery rhymes ....
ಬಹಳ ಚಂದ ಿರುವುದು, ಬರೆಯಲಿಕ್ಕೆ ಬರುವುದು.
ಅಪ್ಪ ದುಡ್ಡು ಕೊಟ್ಟನು, ಪೇಣೆಯನ್ನು ತಂದೆನು.
ಅಆಇಈ ಬರೆದೆನು, ಅಮ್ಮನ ಮುಂದೆ ಹಿಡಿದೆನು.
ಅಮ್ಮ ಹಿಗ್ಗು ಆದಳು, ತಿಂಡಿಯನ್ನು ಕೊಟ್ಟಳು.
ಗಪಾ ಗಪಾ ತಿಂದೆನು, ಥಕಾ ಥಕಾ ಕುಣಿದೆನು.
------------------------------------------
ಒಂದು ಕಾಡಿನ ಮಧ್ಯದೊಳಗೆ
ಎರಡು ಗಿಡಗಳ ನಡುವೆ ಮಲಗಿ
ಮೂರು ಕರಡಿಗಳಾಡುತ್ತಿದ್ದವು
ನಾಲ್ಕು ಮರಿಗಳ ಸೇರಿಸಿ
ಐದು ಜನರು ಬೇಟೆಗಾರರು
ಆರು ಬಲೆಗಳ ಎಳೆದು ತಂದು
ಏಳು ಕರಡಿಗಳ ಹಿಡಿದು ನೋಡದೆ
ಎಂಟು ಹಿಡಿದೆವು ಎಂದರು
ಒಂಭತ್ತೆಂದನು ಅದರಲೊಬ್ಬ
ಹತ್ತು ಎಂದನು ಬೇರೆಯವನು
ಇಲ್ಲೀಗೀಕತೆ ಮುಗಿಯಿತು
--------
ಅತ್ತಿಕಟ್ಟಿ ಬತ್ತಿಕಟ್ಟಿ
ಬಾನೂರ್ ಬಸ್ನೂರ್
ಕೈ ಕೈ ಜೋಡ್ ಕೈ
ಪಂಚಂ ಪಗಡಂ
ತಿಪ್ಪಿ ಮ್ಯಾಲ ಕೋಳಿ
ಜಗತ್ತೆ ಬೋಳಿ
forgotten childhood games...
ಗೋಲಿ (glass balls)
-ಸರಿ ಬೆಸ (gambling with glass balls)
-ಕುಕ್ಕಿ
-ಪಟ್ಟಾ
-ಹತ್ತಿಪ್ಪತ್ತು
-ಪೀಕ ಗೋಲಿ (ಹೆಣ್ಣು ಗಂಡು)
ಒಡ್ಡೊಡ್ಡಿ
-ಹುಣ್ಸೆ ಬೀಜ
-ಹಳ್ಳೊಂಡ್ ಬೀಜ
other games
ಸರಿಗೆರಿ
ಚಿನ್ನಿಕೋಲು
ಬಗರಿ
ಬೀಸ್ಗೋಲು
ಮರ್ ಮಂಗ್ಯನ ಆಟ (ಮರಕೋತಿ)
ಲಗೋರಿ (ತೆಂಗಿನ ಕಾಯಿ ಚಿಪ್ಪಿನಿಂದ)
ಬಳಿಚಿಕ್ಕಿ (broaken pieces of glass bangles)
ಉಪ್ಪವಾ ಉಪ್ಪು (played between poles in temple, a salt seller shuold aquire a pole!)
ಗೌಡ್ರ ಗೌಡ್ರ ಕುಂಬಳಕಾಯಿ
ರತ್ತೊ ರತ್ತೋ
ಅಡಿಗಿ ಆಟ (most played, making a temp family, cooking with mud vescels using leaves.)
ಮುಟ್ಟಾಟ
------------------------------------
Some more from told by Sajid Ali
-ಚೀಟಿ ಆಟ
-ಲಡ್ಡು ಲಡ್ಡು ತಿಮ್ಮಯ್ಯ
-ದುಬ್ಬಾಲಂಡಾ
-ಹಲ್ಪಿ
-ಕುಂಟಾ ಪಿಲ್ಲಿ
-ಚಕ್ಕಾ ವಿಚ್ಚಿ
Tuesday, June 9, 2009
ಗಾಂಧಿಜೀ...
'ಬಾಪೂ ನಿನ್ನೆ ರಾತ್ರಿ ಕನಸ ಕಂಡೆ, ಕನಸು ಕಾಣುವುದು ತಪ್ಪಾ'?
ಇಲ್ಲವಲ್ಲ ಎಂದರು ಬಾಪೂ.
ಒಂದು ಬಯಲು, ಸುತ್ತ ಹಸಿರು
ಮಧ್ಯದಲ್ಲೊಂದು ಪುಟ್ಟ ಮನೆ, ಅದು ನಂದೆ
ಒಂದು ಸರಳ ಮಧುವೆ
ಸುಂದರ ಹೆಂಡತಿ, ಅವಳು ನನ್ನವಳೆ
ಚಂದದ ಮಗು, ಅದೂ ನಂದೆ
ಮಗ ಹುಟ್ಟಿದಾನಲ್ಲ,
ಅವನಿಗಂತ ಸ್ವಲ್ಪ ಕಾಸು, ಜಮೀನು
ಜಮೀನಿನ ಮೇಲೆ ಆಳು, ಕಾಳು
ಅವರಿಗೊಂದಿಷ್ಟು ನೆಲೆ, ಬೆಲೆ
ಮತ್ತೆ ಬಾಪೂಗೆ ಹೇಳಿದೆ.
'ಬಾಪೂ ನಿನ್ನೆ ರಾತ್ರಿ ಕನಸ ಕಂಡೆ, ಕನಸು ಕಾಣುವುದು ತಪ್ಪಾ'?
ಇಲ್ಲ, ಇಲ್ಲ ಕನಸು ಸ್ವಲ್ಪ ದುಬಾರಿಯಾಯ್ತು, ನನ್ನ ಉಪವಾಸದ ಹಾಗೆ.
ನಾಳೆ ಕನಸನ್ನು ಮುಂದುವರೆಸಬೇಡ ಎಂದರು ಬಾಪು!
Monday, June 8, 2009
ಶಿವನ ಫ್ಯಾಮಿಲಿ ಬಗ್ಗೆ ...
-ಪಾರ್ವತಿ ಬರೀ ಬೆವರಿಂದ ಗಣಪನ್ನ ಮಾಡಿದ್ಲು, ಛೀ ಅಷ್ಟಂದು ಗಲೀಜಾ?
-ಶಿವನ ಮನೆ ಬಾತ್ ರೂಂ ಗೆ ಕದ ಯಾಕಿದ್ದಿಲ್ಲ?
-ಗಣಪನ್ನ ಹುಟ್ಸೊ ಮುಂಚೆ, ಬಾತ್ ರೂಂ ಬಾಗ್ಲು ಯಾರ್ ಕಾಯ್ತಿದ್ರೋ?
(ಸ್ಸೀನ್ ಎರಡು: ಶಿವ ಆಫೀಸಿಂದ ಬಂದು, ಗಣಪನ ರುಂಡ ಚಂಡಾಡಿದ)
-ಮೂರ್ ಲೋಕದ್ದು ಪುರಾಣಾ ಕಾಣೋ ಶಕ್ತಿಯಿದ್ದೋನಿಗೆ, ಗಣಪ instant born ಮಗ ಅನ್ನೋದು ಗೊತ್ತಾಗ್ಲಿಲ್ವಾ?
-ಹಿಂದೆ ಮುಂದೆ ನೋಡ್ದೆನೇ ರುಂಡಾ ಹಾರ್ಸೆಬಿಡೋದಾ?
-ತ್ರೀಷೂಲದಿಂದ ರುಂಡ ಹಾರ್ಸೋದಾ? ಸ್ವಲ್ಪ ಕಷ್ಟ
(ಸ್ಸೀನ್ ಮೂರು: ಪಾವ್ರತಿ ಹೊರ್ಗಡೆ ಬಂದು ನೋಡ್ತಾಳೆ)
-ಅಷ್ಟೆಲ್ಲಾ ರಂಪಾಟ ಮಾಡೋಕ್ಕಿಂತಾ, ಮುಂದಿನ ವಾರ ಮತ್ತೆ ಬೆವರಿಂದ ಇನ್ನೊಬ್ಬ ಗಣಪನ್ನ ಮಾಡಿದ್ರಾಗ್ತಿತ್ತೇನೋ?
-ಶಿವ ಪರಮ ಶಿವ, ಪಕ್ಕದಲ್ಲೇ ಬಿದ್ದಿದ್ ಋಂಡಾ ತಗೊಂಡು ಅಂಟ್ಸಿದ್ರ ಎಲ್ಲ ಸರಿಯಾಗ್ತಿತ್ತು
-ಪಾಪ ಮಲ್ಗಿರೋ ಆನೆ ಯಾಕೆ ಕೊಂದು ತರ್ಬೇಕಿತ್ತು? POTA ಗೆ ಗೊತ್ತಾಗಿದ್ರೆ...
(ನಂಗೆ ಅನ್ಸಿದ್ದನ್ನ ಬರ್ದಿದಿನಿ ಸ್ವಾಮಿ, no hard corners)
ಅನ್ಸಿದ್ದು ಅದ್ನೆ ಬರ್ದಿದ್ದು...
--------------------------------
ಎಲ್ಲಿಗೆ?
ಸುಮ್ಮನೆ
--------------------------------
ಭ್ರೂಣ (womb)
ಬಾಡಿಗೆ ಮನೆಯೋ?
ಸ್ವಂತದ್ದೋ?
--------------------------------
(ಹಳೆ ಹಾಡು, ನಮ್ಮಜ್ಜಿ ಹೇಳಿದ್ದು)
ಚಂದಪ್ಪ ಚಂದಪ್ಪ ಚಲುವ
ಬಂಡಿ ಏರ್ಕೊಂಡ ಬರುವ
ಬಂಡಿ ಹೊಡಿಯೋ ಜಾಣ
ಜಾಣನ್ ಮುಕಳಾಗ ಮ್ಯಾಣ
ಮ್ಯಾಣ ತಗಿಯೋ ಮಲ್ಲಿ
ಮಲ್ಲಿ ಕಾಲಾಗ ಪಿಲ್ಲಿ
----------------------------
ಹಗಲು
ನಿನ್ನ ಕನಸುಗಳ ಮಧ್ಯೆ ಸಿಗುವ
ಇಂಟೆರವೆಲ್
---------------------------
ಗಂಟೆ
ದೇವರ ಅಲಾರಾಂ
---------------------------
ಮೇಪ ಸಾವಿಗನ
ದಾರಿ ಹೋಹುಳದಾಗ
ಎನ್ನ ಬಳಿಗಾರು
ಸುವಾ ನುಡಿವನು
ಇಳಯ ಮರೆಗೆ
ಸರಿ ತುಂಬಿದ
ಓ...
ಓ...
ಓಲೆಗಾರ
--------------------------------
ಮತ್ತೊಂದು ರಾತ್ರಿಯ ಪದ್ಯ.
ಹೊತ್ತು ಮುಳುಗಿ ಕತ್ತಲಾಗುತ್ತಿಂದತೆಯೇ
ಹೊತ್ತಿಕೊಳ್ಳುತ್ತವೆ ನನ್ನಲ್ಲಿ ವಿರಹದ ಹಾಡುಗಳು.
ರಾತ್ರಿಯೆಲ್ಲ ಮನವೆಂಬುದು ಸೂತಕದ ಮನೆಯಾಗಿ
ಕಾಯುತ್ತಿರುತ್ತದೆ ಎಂದೂ ಸಾಯದ ಸಾವಿಗಾಗಿ.
ಎಂದೋ ಸಾಯಬೇಕಿದ್ದ ವಿರಹ ಇಂದೂ ಬದುಕಿದೆ
ಬಹು ಹಿಂದೆ ನೀಡಿದ ಹನಿ ಪ್ರೇಮದ ಸಂಜಿವಿನಿಯಿಂದಾಗಿ.
ಈ ಕಗ್ಗದ ಸುಗ್ಗಿಯಲಿ ಕೈಗೆಟುಕದ ಫಸಲು ರಾಶಿ-ರಾಶಿ
ಒಂದೆ ರಾತ್ರಿಯಲಿ ಬಿತ್ತಿ, ಬೆಳೆದು, ಉಂಡು
ಉಳಿದಿದ್ದಲ್ಲವನೂ ನಾಳೆಗಾಗಿರಿಸಿದ್ದೇವೆಂಬುದು ಬರಿ ನೂವು.
ಕಸುವು ಬೇಕಿಲ್ಲ, ಬೇಸಾಯಬೇಕಿಲ್ಲ, ಕಸ ಕೀಳಬೇಕಿಲ್ಲ
ನೀರುಣಿಸಿ, ಹಕ್ಕಿಕಾಯ್ದು, ಕೊಯ್ಲು ಮಾಡಬೇಕಿಲ್ಲ,
ಅವಳು ಬರಿ ಬಿತ್ತಿದರೆ ಸಾಕು ಎತ್ತೆತ್ತಲೂ ವಿರಹದ ತೆನೆ.
ಒಂದು ರಾತ್ರಿ, ಒಂದು ಪದ್ಯ ಸ್ವಲ್ಪ ಮಧ್ಯ
ಯಾಕೆ ಕಾಯಬೇಕಿದೆ ಶಿವರಾತ್ರಿಗಾಗಿ?
ಒಂದು ದಿನ ಅವಳು ಕೊಟ್ಟ ಪ್ರೇಮವೇ ಕೊನೆ
ಮಿಕ್ಕಿದ್ದೆಲ್ಲವೂ ಬರೀ ಶಿವರಾತ್ರಿಗಳು.
ನಾನೂ ಮತ್ತು ರಾತ್ರಿಯೂ...
ಈ ರಾತ್ರಿಗಳಲ್ಲಿ ನಾನೂ ರಾತ್ರಿಯೂ ದಿವ್ಯ ಮೌನ ಮರೆತು,
ಒಬ್ಬರನ್ನೊಬ್ಬರು ನೋಡುತ್ತೇವೆ.
ನಾನೂ ಮಾತಾಡೊಲ್ಲ, ರಾತ್ರಿಯೂ ಮೂಗಿ
ಆದರೂ ಕಳೆಯುತ್ತೇವೆ ಒಂದಾಗಿ.
ಒಂದು ರಾತ್ರಿ, ನಾನು ರಾತ್ರಿಗೆ ಕೇಳಿದೆ
ಎಲ್ಲಿ ನಿನ್ನ ಪ್ರಿಯತಮ? ರಾತ್ರಿ ಹೇಳಿದಳು,
ನಾನು ಒಬ್ಬಂಟಿ ವಿಧವೆ,
ನಿನ್ನೆ ಸಂಜೆಯಷ್ಟೇ ನನ್ನ ಹಗಲುರಾಯ ತೀರಿಹೋದ.
ನಾನು ಕೇಳಿದೆ, ಆದರೂ ಯಾರಿಗಾಗಿ ಬದುಕಿರುವೆ?
ರಾತ್ರಿ ಹೇಳಿತು, ಯಾರಿಗಾಗಿ ಬದುಕದಿರುವುದಕ್ಕೆ ನನಗೆ ರಾತ್ರಿ ಎನ್ನುವರು,
ನಿಮ್ಮವರಾರೋ ಸತ್ತರೆ ನನಗೆ ಹೋಲಿಸುತ್ತೀರಿ
ನಾನು ಸತ್ತರೆ ಬೆಳಗಾಯಿತೆಂದು ಸಂಭ್ರಮಿಸುತ್ತೀರಿ.
ನಾನು ಮೂಕನಾದೆ, ಮತ್ತೇ ರಾತ್ರಿಯೇ ಕೇಳಿದಳು,
ನಾನು ಸಾಯುವುದರೊಳಗಾಗಿ ನೋಡಬೇಕಿದೆ ಹಗಲನ್ನ ತೋರಿಸುವೆಯಾ?
ನಾನು ಬರಿದೇ ನಕ್ಕೆ,
ನಾನು ಬೆಳಗನ್ನು ನೋಡೇನೇ?